ಶಿವ್‌ ಪಾಂಡೆ

Editorial Member

shiv.pandey@azimpremjifoundation.org
Placeholder image

ಶಿವ್ ಪಾಂಡೆ ಅವರು ಪ್ರಾಣಿವಿಜ್ಞಾನದಲ್ಲಿ ಎಂ.ಎಸ್ಸಿ, ಜೀವವಿಜ್ಞಾನದಲ್ಲಿ ಎಂ.ಫಿಲ್ ಮತ್ತು ಬಿ.ಎಡ್ ಪದವಿಗಳನ್ನು ಹೊಂದಿದ್ದಾರೆ. 12 ವರ್ಷಗಳ ಕಾಲ ವಿಜ್ಞಾನ ಶಿಕ್ಷಕರಾಗಿ ಕೆಲಸ ಮಾಡಿದ ನಂತರ, ಅವರು ಶಿಕ್ಷಕ ತರಬೇತುದಾರರಾಗಿ ಅಜೀಂ ಪ್ರೇಮ್‌ಜೀ ಫೌಂಡೇಷನ್ ಸೇರಿದರು. ಪಠ್ಯಕ್ರಮದ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸುವುದು, ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕವಾದ ಮಾಡ್ಯೂಲ್‌ಗಳನ್ನು ರೂಪಿಸುವುದು, ಪಠ್ಯಪುಸ್ತಕಗಳ ಅವಲೋಕನ, ಕಾರ್ಯಾಗಾರಗಳನ್ನು ನಡೆಸುವುದು, ಶಿಕ್ಷಕರಿಗೆ ತರಬೇತಿ ನೀಡುವುದು ಮತ್ತು ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಿಗೆ ತರಗತಿ ಬೋಧನೆಯಲ್ಲಿ ಬೆಂಬಲ ನೀಡುವುದು—ಇವು ಇವರ ಪ್ರಸ್ತುತ ಕಾರ್ಯಕ್ಷೇತ್ರಗಳಾಗಿವೆ. ಶಿವ್ ಅವರು ಉಧಮ್ ಸಿಂಗ್ ನಗರದ ಫೀಲ್ಡ್ ಇನ್‌ಸ್ಟಿಟ್ಯೂಟ್‌ನಲ್ಲಿ ಫೀಲ್ಡ್ ಫ್ಯಾಕಲ್ಟಿಯಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ‘ಕರಿಕ್ಯುಲರ್‌ ಮಟೀರಿಯಲ್‌ ಡೆವೆಲಪ್‌ಮೆಂಟ್‌’ ಮತ್ತು ‘ಶಿಕ್ಷಕರ ವೃತ್ತಿಪರ ಅಭಿವೃದ್ಧಿ’ ವಿಷಯಗಳ ಕುರಿತು ಬೋಧಿಸಿದ್ದಾರೆ.