ವಿಸ್ತರಣೆಗಳು
At Right Angles, A Resource for school Mathematics
ಪಠ್ಯಪುಸ್ತಕದಲ್ಲಿರುವ ಒಂದು ಶೈಕ್ಷಣಿಕ ವಿಷಯವನ್ನು ಕಲಿಕಾ ಸಾಮಗ್ರಿಗಳು ಹೇಗೆ ವಿಸ್ತರಿಸುತ್ತವೆ? ವಿಭಿನ್ನ ವಿಧಾನಗಳಲ್ಲಿ ಕಲಿಯುವವರಿಗೆ ಮತ್ತು ಬೇರೆ ಬೇರೆ ಸಂದರ್ಭಗಳಿಗೆ ಅನುಗುಣವಾಗಿ ನೀವು ಅವುಗಳನ್ನು ಹೇಗೆ ಬದಲಿಸಿಕೊಳ್ಳಬಹುದು? ಪಠ್ಯಪುಸ್ತಕದ ಜ್ಞಾನವನ್ನು ಮಕ್ಕಳಿಗೆ ಮುಟ್ಟಿನೋಡಬಹುದಾದಷ್ಟು ಸರಳವಾಗಿಸುವ ಮತ್ತು ವಿದ್ಯಾರ್ಥಿಗಳ ಜೀವನದ ಅನುಭವಗಳಿಗೆ ಹತ್ತಿರವಾಗಿಸುವ ಬೋಧನಾ-ಕಲಿಕಾ ಸಾಮಗ್ರಿಗಳ ಪರಿಚಯ ಇಲ್ಲಿದೆ. ... ಈ ಸಾಮಗ್ರಿಗಳು ವಿಜ್ಞಾನವನ್ನು ವಿದ್ಯಾರ್ಥಿಗಳ ಪ್ರಪಂಚಕ್ಕೆ ಹೇಗೆ ಜೋಡಿಸುತ್ತವೆ ಮತ್ತು ವಿಜ್ಞಾನದ ಕಲಿಕೆಯಲ್ಲಿ ಎಲ್ಲರೂ ಭಾಗಿಗಳಾಗುವಂತೆ ಹೇಗೆ ಮಾಡುತ್ತವೆ ಎಂಬುದನ್ನು ಇಲ್ಲಿ ಓದಿ. ವಿವಿಧ ಭಾಷಾ ಹಿನ್ನೆಲೆಯ ಮತ್ತು ವಿಭಿನ್ನ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಸಾಮಗ್ರಿಗಳ ವೈವಿಧ್ಯಮಯ ರೂಪಗಳು ಹೇಗೆ ನೆರವಾಗುತ್ತವೆ ಎಂಬುದನ್ನು ಗಮನಿಸಿ. ನೀವು ಬಳಸಿದ ಮಕ್ಕಳ ಕಥೆ, ಯೂಟ್ಯೂಬ್ ವಿಡಿಯೋ, ಕಡಿಮೆ ವೆಚ್ಚದ ವಿಜ್ಞಾನ ಕಿಟ್, ಪಾಡ್‌ಕಾಸ್ಟ್, ಸಮುದಾಯ ವಿಜ್ಞಾನ ಯೋಜನೆ ಅಥವಾ ಆನ್‌ಲೈನ್ ಆ್ಯಪ್‌ಗಳ ಬಗ್ಗೆ ನಮಗೆ ತಿಳಿಸಿ. ಇಲ್ಲಿ ಪ್ರಚಾರಕ್ಕಿಂತ ನಿಮ್ಮ ವೈಯಕ್ತಿಕ ಅನುಭವವೇ ಹೆಚ್ಚು ಮುಖ್ಯ.