ಲೇಖನವನ್ನು ಸಲ್ಲಿಸಿ

ಐ ವಂಡರ್… ಪತ್ರಿಕೆಯು ಸರ್ಕಾರಿ ಶಾಲೆಗಳಲ್ಲಿ ಪೂರ್ವಸಿದ್ಧತಾ ಹಂತದ (3-5ನೇ ತರಗತಿ) ಪರಿಸರ ಅಧ್ಯಯನ ಮತ್ತು ಮಾಧ್ಯಮಿಕ ಹಂತದ (6-8ನೇ ತರಗತಿ) ವಿಜ್ಞಾನದ ಕಲಿಕೆ ಮತ್ತು ಬೋಧನೆಗೆ ನೆರವಾಗುವ ಬರಹಗಳನ್ನು ಸ್ವಾಗತಿಸುತ್ತದೆ.

ನಾವು ಈ ಕೆಳಕಂಡ ರೀತಿಯ ಲೇಖನಗಳನ್ನು ಪ್ರಕಟಿಸುತ್ತೇವೆ:

  • ತರಗತಿಯ ಅನುಭವದಿಂದ ಮೂಡಿಬಂದಿರುವ ಮತ್ತು ಪ್ರಾಯೋಗಿಕವಾಗಿ ಪಳಗಿದ ಲೇಖನಗಳು;
  • ವಿದ್ಯಾರ್ಥಿಗಳಿಗೆ ಗಮನವಿಟ್ಟು ವೀಕ್ಷಿಸುವ, ಪುರಾವೆಗಳೊಂದಿಗೆ ತರ್ಕಿಸುವ, ಪಠ್ಯಪುಸ್ತಕದ ಪ್ರತಿಪಾದನೆಗಳನ್ನು ಪರೀಕ್ಷಿಸುವ ಮತ್ತು ವಿಜ್ಞಾನದ ಪರಿಕಲ್ಪನೆಗಳನ್ನು ತಮ್ಮ ದೈನಂದಿನ ಜಗತ್ತಿಗೆ ಅನ್ವಯಿಸುವ ನೇರ ಅನುಭವ ನೀಡುವ ವಿಧಾನಗಳನ್ನು ವಿವರಿಸುವ ಲೇಖನಗಳು;
  • ಪರಿಸರ ಅಧ್ಯಯನ ಅಥವಾ ವಿಜ್ಞಾನ ಶಿಕ್ಷಕರು ತಮ್ಮ ತರಗತಿಯ ಸಂದರ್ಭಕ್ಕೆ ಅನುಗುಣವಾಗಿ ಬೋಧನೆಯನ್ನು ಯೋಜಿಸಲು ಮತ್ತು ರೂಪಿಸಲು ಬಳಸಬಹುದಾದ ಸಂಪನ್ಮೂಲಗಳು.

ವಿಜ್ಞಾನ ಶಿಕ್ಷಕರಾಗಿ, ಶಿಕ್ಷಕ ತರಬೇತುದಾರರಾಗಿ ಅಥವಾ ಸಂಶೋಧಕರಾಗಿ ನೀವು ಮಾಡುತ್ತಿರುವ ಕೆಲಸಗಳು ಈ ಮೇಲಿನ ಅಗತ್ಯತೆಗಳನ್ನು ಪೂರೈಸುತ್ತಿದ್ದರೆ, ನಿಮ್ಮ ಲೇಖನದ ಸಂಕ್ಷಿಪ್ತ ರೂಪರೇಖೆಯನ್ನು ಅಥವಾ ಪೂರ್ಣ ಪ್ರತಿಯನ್ನು ಕೆಳಗಿನ ಫಾರ್ಮ್ ಬಳಸಿ ಸಲ್ಲಿಸಬಹುದು. ಬರಹಗಳನ್ನು iwonder@apu.edu.in. ಇಮೇಲ್ ವಿಳಾಸಕ್ಕೂ ಕಳುಹಿಸಬಹುದು. ನಿಮ್ಮ ಲೇಖನವನ್ನು ಸಲ್ಲಿಸುವ ಮೊದಲು, ಲೇಖಕರಿಗೆ ಕೆಲವು ಸೂಚನೆಗಳು ಭಾಗವನ್ನು ಓದಬೇಕೆಂದು ನಾವು ಬಲವಾಗಿ ಶಿಫಾರಸು ಮಾಡುತ್ತೇವೆ. ಲೇಖನದಲ್ಲಿ ನಾವು ಏನನ್ನು ನಿರೀಕ್ಷಿಸುತ್ತೇವೆ ಮತ್ತು ನಿಮ್ಮ ರೂಪರೇಖೆ ಅಥವಾ ಕರಡು ಪ್ರತಿಯನ್ನು ಹೇಗೆ ಸಿದ್ಧಪಡಿಸಬೇಕು ಎಂಬುದರ ಕುರಿತು ಹೆಚ್ಚಿನ ವಿವರಗಳು ಈ ಮಾರ್ಗಸೂಚಿಗಳಲ್ಲಿವೆ.

ಲೇಖಕರಿಗೆ ಕೆಲವು ಸೂಚನೆಗಳು

    ಗರಿಷ್ಠ 100 ಪದಗಳು(0/100)

    ಗರಿಷ್ಠ 100 ಪದಗಳು(0/100)

    ದಯವಿಟ್ಟು DOC, DOCX, ಅಥವಾ ZIP ಫೈಲ್‌ಗಳನ್ನು ಮಾತ್ರ ಅಪ್‌ಲೋಡ್ ಮಾಡಿ. ಪ್ರತಿ ಫೈಲ್ ಗಾತ್ರವು 2MB ಮೀರಬಾರದು. ಜಿಪ್ ಮಾಡಿದ ನಂತರ ನಿಮ್ಮ ಒಟ್ಟು ಫೈಲ್ ಗಾತ್ರವು 2MB ಗಿಂತ ಹೆಚ್ಚಿದ್ದರೆ, ನೀವು ವಿಭಿನ್ನ ಲಗತ್ತುಗಳೊಂದಿಗೆ ಫಾರ್ಮ್ ಅನ್ನು ಹಲವು ಬಾರಿ ಸಲ್ಲಿಸಬಹುದು.

    ನಿಮ್ಮ ಲೇಖನಗಳನ್ನು iwonder@apu.edu.in ಗೆ ಸಹ ಕಳುಹಿಸಬಹುದು