ಪತ್ರಿಕೆಯ ಸಂಚಿಕೆಗಳು
ಈ ವಿಭಾಗದಲ್ಲಿ ನೀವು ಐ ವಂಡರ್... ಪತ್ರಿಕೆಯ ಮುದ್ರಿತ ಆವೃತ್ತಿಗಳನ್ನು ನೋಡಬಹುದು (ಒಂದು ವರ್ಷಕ್ಕೆ ಮೂರು ಸಂಚಿಕೆಗಳು). ಮುದ್ರಿತ ಪ್ರತಿಗಳನ್ನು ಡಯಟ್ (DIETs), ಬಿ.ಆರ್.ಸಿ (BRCs) ಮತ್ತು ಶಾಲೆಗಳಂತಹ ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಇದರ ವಿಷಯ ವಸ್ತು ಡಿಜಿಟಲ್ ಆವೃತ್ತಿಯಂತೆಯೇ ಇದ್ದರೂ, ಮುದ್ರಿತ ಪ್ರತಿಗಳು ಶಾಲಾ-ಸಂಸ್ಥೆಗಳಲ್ಲಿ ಎಲ್ಲರೂ ಒಟ್ಟಾಗಿ ... ಓದಲು ಮತ್ತು ಚರ್ಚಿಸಲು ಹೆಚ್ಚು ಪೂರಕವಾಗಿವೆ. ಇವುಗಳನ್ನು ಸಭೆಗಳಲ್ಲಿ, ಕಾರ್ಯಾಗಾರಗಳಲ್ಲಿ ಮತ್ತು ಬೋಧನಾ ಯೋಜನೆಯ ಚರ್ಚೆಗಳಲ್ಲಿ ಬಳಸಬಹುದು. ಇವು ಯಾವುದೇ ಅಡೆತಡೆಯಿಲ್ಲದೆ ನಿಧಾನವಾಗಿ ಓದಲು, ಟಿಪ್ಪಣಿಗಳನ್ನು ಮಾಡಿಕೊಳ್ಳಲು ಮತ್ತು ಅವಶ್ಯವಾದಾಗ ಮತ್ತೊಮ್ಮೆ ಓದಲು ಅನುಕೂಲಕರವಾಗಿವೆ. ನಿಮ್ಮ ಸಂಸ್ಥೆಯಲ್ಲಿ ಪರಿಸರ ಅಧ್ಯಯನ ಮತ್ತು ವಿಜ್ಞಾನ ಬೋಧನೆಯ ಕುರಿತಾದ ಚರ್ಚೆಗಳನ್ನು ನಡೆಸಲು ಈ ಆವೃತ್ತಿಗಳನ್ನು ಬಳಸಿಕೊಳ್ಳಬಹುದು.