ಅನ್ವೇಷಣೆಗಳು

At Right Angles, A Resource for school Mathematics

ಪಠ್ಯಪುಸ್ತಕಗಳಲ್ಲಿರುವ ವೈಜ್ಞಾನಿಕ ವಿಚಾರಗಳನ್ನು ವಿಜ್ಞಾನಿಗಳು ಹೇಗೆ ಕಂಡುಕೊಂಡರು? ವಿದ್ಯಾರ್ಥಿಗಳು ಒಂದು ವಿಷಯವನ್ನು ಕೇವಲ ಓದುವ ಬದಲು, ಅದನ್ನು ತಾವೇ ಪರೀಕ್ಷಿಸಿ ನೋಡಿದಾಗ ಏನಾಗುತ್ತದೆ? ಇಲ್ಲಿ ನಾವು ಪಠ್ಯಪುಸ್ತಕದ ವಿಚಾರಗಳ ಹಿಂದಿರುವ ಪುರಾವೆ ಮತ್ತು ತರ್ಕಗಳನ್ನು ವಿಶ್ಲೇಷಿಸುತ್ತೇವೆ ಹಾಗೂ ಅವುಗಳನ್ನು ದಿನನಿತ್ಯದ ಜೀವನದ ಪ್ರಶ್ನೆಗಳೊಂದಿಗೆ ಜೋಡಿಸಿ ಅನ್ವೇಷಿಸುತ್ತೇವೆ. ವಿಜ್ಞಾನದ ... ತಿಳಿವಳಿಕೆ ಕಾಲಕ್ರಮೇಣ ಹೇಗೆ ಬೆಳೆಯಿತು ಮತ್ತು ಇಂದಿನ ತರಗತಿಗಳಲ್ಲಿ ಅವುಗಳನ್ನು ಹೇಗೆ ಪರೀಕ್ಷಿಸಬಹುದು ಎಂದು ತೋರಿಸುವ ಲೇಖನಗಳನ್ನು ಇಲ್ಲಿ ಓದಿ. ವಿಜ್ಞಾನಿಗಳು ಕೆಲಸ ಮಾಡುವ ರೀತಿ ಮತ್ತು ವಿದ್ಯಾರ್ಥಿಗಳು ವಿಜ್ಞಾನಿಗಳಂತೆ ಆಲೋಚಿಸುವುದನ್ನು ಕಲಿಯುವ ವಿಧಾನ – ಇವೆರಡನ್ನೂ ವಿಜ್ಞಾನದ ಪ್ರಕ್ರಿಯೆಯು ಹೇಗೆ ಒಂದುಗೂಡಿಸುತ್ತದೆ ಎಂಬುದನ್ನು ಗಮನಿಸಿ. ಪರಿಸರ ಅಧ್ಯಯನ ಮತ್ತು ವಿಜ್ಞಾನ ಪಠ್ಯಪುಸ್ತಕಗಳಲ್ಲಿನ ವಿಚಾರಗಳ ಬಗ್ಗೆ ನಿಮ್ಮ ಅನ್ವೇಷಣೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅಂತಿಮ ತೀರ್ಮಾನಕ್ಕೆ ಬರುವುದಕ್ಕಿಂತ ಹೆಚ್ಚಾಗಿ, ಮುಕ್ತವಾಗಿ ಅನ್ವೇಷಿಸುವುದು ನಮಗೆ ಮುಖ್ಯ.