ಡೆಬೊರಾ ದತ್ತಾ ಅವರು ಪ್ರಸ್ತುತ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಕೆಲಸಮಾಡುತ್ತಿದ್ದಾರೆ. ಅಲ್ಲಿ ಅವರು ವಿಜ್ಞಾನ, ಗಣಿತ, ಇತಿಹಾಸ ಮತ್ತು ಕಲೆಗಳ ಮೂಲಕ ‘ತಿಳಿವಳಿಕೆ’ಯ ವಸಾಹತುಶಾಹಿ ವಿರೋಧಿ ಮತ್ತು ಬಹುಶಿಸ್ತೀಯ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮಣ್ಣು-ಆಧಾರಿತ ಬೋಧನಾ ಪದ್ಧತಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ (ನೋಡಿ: https://soilcamp.ca/). ಇವರು ಮುಂಬೈನ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ (HBCSE) ನಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಡೆಬೊರಾ ಅವರಿಗೆ ಕಥೆಗಳು, ಬೀಜಗಳು ಮತ್ತು ಅಡುಗೆ ವಿಧಾನಗಳನ್ನು ಸಂಗ್ರಹಿಸುವುದು ಹಾಗೂ ಹಂಚಿಕೊಳ್ಳುವುದರಲ್ಲಿ ಬಹಳ ಆಸಕ್ತಿ.