ಅನೀಶ್ ಮೊಕಾಶಿ

ಅನೀಶ್ ಮೊಕಾಶಿ ಅವರು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದಾರೆ. ಪ್ರಾಯೋಗಿಕ ಭೌತವಿಜ್ಞಾನದಲ್ಲಿ ಹಿನ್ನೆಲೆ ಹೊಂದಿರುವ ಇವರು ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೀಶ್ ಅವರು ಈ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ; ಭೋಪಾಲ್‌ನ ಏಕಲವ್ಯ ಸಂಸ್ಥೆ ನಡೆಸುವ ವಿಜ್ಞಾನ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ ಮತ್ತು ಬೆಂಗಳೂರಿನ ಪೂರ್ಣ ಲರ್ನಿಂಗ್ ಸೆಂಟರ್‌ನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ವಿಜ್ಞಾನ ಕಲಿಯುವಾಗ ‘ಮಾಡುವುದು’ ಮತ್ತು ‘ಯೋಚಿಸುವುದು’ ಎರಡನ್ನೂ ಪರಸ್ಪರ ಜೋಡಿಸುವುದು ಹೇಗೆ, ವಿದ್ಯಾರ್ಥಿಗಳ ಆಲೋಚನೆಗಳು ಮತ್ತು ಅವರು ವಿಷಯವನ್ನು ಅರ್ಥೈಸಿಕೊಳ್ಳುವ ರೀತಿ, ಬೋಧನೆ-ಕಲಿಕೆಯ ಸಂಸ್ಕೃತಿ ಮತ್ತು ವಿಜ್ಞಾನದ ಇತಿಹಾಸ—ಇವು ಇವರ ಆಸಕ್ತಿಯ ವಿಷಯಗಳಾಗಿವೆ.

ಲೇಖಕರಿಂದ

ಶಬ್ದ ಮತ್ತು ಬೆಳಕನ್ನು ಅಲೆಗಳಾಗಿ ದೃಶ್ಯೀಕರಿಸುವುದು ಮತ್ತು ಅವುಗಳ ವೇಗವನ್ನು ಹೋಲಿಸುವುದು (ಶಿಕ್ಷಕರ ಮಾರ್ಗದರ್ಶಿ)
ಸರಳರೇಖೆಯಲ್ಲಿ ಚಲನೆಗೆ ಸಂಬಂಧಿಸಿದ ಪರಕಲ್ಪನೆಗಳನ್ನು ಬೋಧಿಸುವುದಕ್ಕೆ ಸಲಹೆಗಳು. (ಶಿಕ್ಷಕರ ಮಾರ್ಗದರ್ಶಿ)