ಸುಶಿಲ್‌ ಜೋಷಿ

Editorial Member

rusushil@yahoo.com
Placeholder image

ಸುಶೀಲ್ ಜೋಶಿ ಅವರು ಸ್ವತಂತ್ರ ವಿಜ್ಞಾನ ಬರಹಗಾರರು ಮತ್ತು ಅನುವಾದಕರು. ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ರಸಾಯನವಿಜ್ಞಾನದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿದ ನಂತರ, ಅವರು 1982 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ‘ಕಿಶೋರ್ ಭಾರತಿ’ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಸೇರಿದರು. ಅಲ್ಲಿ ಅವರು ವಿಶೇಷವಾಗಿ ‘ಹೋಶಂಗಾಬಾದ್ ಸೈನ್ಸ್‌ ಟೀಚಿಂಗ್‌ ಪ್ರೋಗ್ರಾಂʼನಲ್ಲಿ (HSTP) ತೊಡಗಿಸಿಕೊಂಡಿದ್ದರು ಮತ್ತು 2002 ರಲ್ಲಿ ಅದು ಮುಚ್ಚುವವರೆಗೂ ಅದರೊಂದಿಗೆ ಕೆಲಸ ಮಾಡಿದರು. ಪ್ರಸ್ತುತ ಅವರು ಏಕಲವ್ಯ ಸಂಸ್ಥೆಯ ‘ಸ್ರೋತ್ ಫೀಚರ್ಸ್’ ಎಂಬ ವಿಜ್ಞಾನ ಮತ್ತು ತಂತ್ರಜ್ಞಾನ ಸುದ್ದಿ ಸೇವೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.