ಐ ವಂಡರ್‌…ನ ಮೊಬೈಲ್‌ ಸ್ನೇಹಿ ಡಿಜಿಟಲ್‌ ಆವೃತ್ತಿಗೆ ಸ್ವಾಗತ!

ನಾವು ಶಿಕ್ಷಕರು ಮತ್ತು ಸಂಶೋಧಕರು ಸಿದ್ಧಪಡಿಸಿದ, ಲೇಖನ ಹಾಗೂ ತರಗತಿ ಸಂಪನ್ಮೂಲಗಳನ್ನು ಒಂದೆಡೆ ತರುತ್ತೇವೆ. ಸುಲಭವಾಗಿ ಲಭ್ಯವಿರುವ ಹಾಗೂ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸಿ ತಯಾರಿಸಿರುವ ಈ ಸಂಪನ್ಮೂಲಗಳು, ಶಾಲೆಯಲ್ಲಿ ಪರಿಸರ ಅಧ್ಯಯನ ಮತ್ತು ವಿಜ್ಞಾನ ಕಲಿಕೆಗೆ ನೆರವಾಗುತ್ತವೆ. ಸೂಕ್ಷ್ಮವಾಗಿ ಗಮನಿಸುವುದು, ಚರ್ಚಿಸುವುದು, ಪ್ರಶ್ನಿಸುವುದು ಮತ್ತು ಆಲೋಚನೆಗಳನ್ನು ಮರುಪರಿಶೀಲಿಸಲು ಮಕ್ಕಳನ್ನು ಪ್ರೇರೇಪಿಸುವಂತಹ ಹ್ಯಾಂಡ್ಸ್‌-ಆನ್‌ ಚಟುವಟಿಕೆಗಳ ಮೂಲಕ ಮಗುವಿಗೆ ತನ್ನ ಸುತ್ತಲಿನ ಪ್ರಪಂಚದ ಬಗ್ಗೆ ಇರುವ ಕುತೂಹಲ ಮತ್ತು ವಿಸ್ಮಯವನ್ನು ಪೋಷಿಸುವ ಹಲವು ಬೋಧನಾ ಕ್ರಮಗಳ ಉದಾಹರಣೆಗಳನ್ನು ನೀವು ಇಲ್ಲಿ ನೋಡಬಹುದು. ವಿದ್ಯಾರ್ಥಿಗಳು ಏಕಾಗ್ರತೆ, ತರ್ಕಬದ್ಧ ಚಿಂತನೆ ಮತ್ತು ಸಾಕ್ಷ್ಯಾಧಾರಗಳನ್ನು ಮುಕ್ತವಾಗಿ ಸ್ವೀಕರಿಸುವಂತಹ ಉತ್ತಮ ಗುಣಗಳನ್ನು ಬೆಳೆಸಿಕೊಂಡು, ಪಠ್ಯಕ್ರಮ ಗುರಿಗಳಿಗೆ ಜೀವ ತುಂಬುವುದನ್ನು ನೀವು ನೋಡುತ್ತೀರಿ. ಈ ಸಂಪನ್ಮೂಲಗಳು ನಮ್ಮ ಸಂವಿಧಾನವು ಪ್ರತಿಪಾದಿಸುವ ವೈಜ್ಞಾನಿಕ ಮನೋಧರ್ಮ, ಮಾನವೀಯತೆ ಮತ್ತು ವೈಚಾರಿಕತೆ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲೂ ನೆರವಾಗುತ್ತವೆ.

ನೀವು ಪಾಠ ಮಾಡಲು ತಯಾರಿ ನಡೆಸುತ್ತಿರಬಹುದು, ಬಸ್‌ನಲ್ಲಿ ಪ್ರಯಾಣಿಸುತ್ತಿಬಹುದು ಅಥವಾ ತರಗತಿಗಳ ನಡುವಿನ ವಿರಾಮದಲ್ಲಿ ಓದುತ್ತಿರಬಹುದು – ಈ ಯಾವುದೇ ಸಂದರ್ಭದಲ್ಲಿ ಈ ಮೊಬೈಲ್‌ ಸ್ನೇಹಿ ಸಂಚಿಕೆಯನ್ನು ನೀವು ಸುಲಭವಾಗಿ ಬಳಸಬಹುದು. ಇದನ್ನು ಅನ್ವೇಷಿಸಲು ನಿಮ್ಮನ್ನು ನಾವು ಆಹ್ವಾನಿಸುತ್ತೇವೆ – ಕೇವಲ ನಾಳಿನ ತರಗತಿಯ ತಯಾರಿಗಲ್ಲ, ವಿಜ್ಞಾನವನ್ನು ಏಕೆ ಮತ್ತು ಹೇಗೆ ಹೇಳಿಕೊಡಬೇಕು ಎಂದು ಆಲೋಚಿಸಲೂ ಕೂಡ!