ಅವನೀಶ್ ಸಿಂಗ್

ಅವನೀಶ್ ಸಿಂಗ್ ಅವರು ಎಂಜಿನಿಯರಿಂಗ್‌ ಓದಿ, ನಂತರ ಶಿಕ್ಷಣ ಸಂಶೋಧಕರಾಗಿ ಬದಲಾದವರು. ಇವರು ಸೂಕ್ಷ್ಮದರ್ಶನ (Microscopy), ದೂರದರ್ಶನ (Telescopy) ಮತ್ತು ಪ್ರಕೃತಿ ನಡಿಗೆಯನ್ನು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಶಿಕ್ಷಣದ ನೈಜವಾದ ಅನುಭವಗಳನ್ನು ನೀಡುವ ಪರಿವರ್ತನಕಾರಿ ಸಾಧನಗಳಾಗಿ ನೋಡುತ್ತಾರೆ. ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‌ನಲ್ಲಿ ಕೆಲಸ ಮಾಡುತ್ತಿರುವ ಇವರು, ಈ ಬೋಧನಾ ವಿಧಾನಗಳ ಬಗ್ಗೆ ಕಾರ್ಯಾಗಾರಗಳನ್ನು ಸಹ ನಡೆಸಿಕೊಡುತ್ತಾರೆ. ಇವರನ್ನು X, ಇನ್‌ಸ್ಟಾಗ್ರಾಮ್ ಮತ್ತು ಲಿಂಕ್ಡ್‌ಇನ್‌ನಲ್ಲಿ @avanishutsav ಹೆಸರಿನಲ್ಲಿ ನೋಡಬಹುದು.