ರಾಕೇಶ್ ತಿವಾರಿ ಅವರು ಐ ವಂಡರ್… ಪತ್ರಿಕೆಯ ಸಲಹಾ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮೇ 2009 ರಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಇವರು ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರೊಂದಿಗೆ ನೇರವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಇವರು ಜಾರ್ಖಂಡ್‌ನಲ್ಲಿ ಫೌಂಡೇಷನ್‌ನ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಕುರಿತಾದ ಕೆಲಸಗಳ ನೇತೃತ್ವ ವಹಿಸಿದ್ದಾರೆ.