ಲಾವಣ್ಯ ಕಾರ್ತಿಕ್

ಲಾವಣ್ಯ ಕಾರ್ತಿಕ್

ಲಾವಣ್ಯ ಕಾರ್ತಿಕ್ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಮಕ್ಕಳ ಪುಸ್ತಕಗಳ ಲೇಖಕರು ಮತ್ತು ಚಿತ್ರಕಾರರು. ಅವರು ಶಾಲಾ ದಿನಗಳಲ್ಲಿ ತಮ್ಮ ನೋಟ್‌ಬುಕ್‌ಗಳಲ್ಲಿ ಕಥೆಗಳನ್ನು ಬರೆಯಲು ಮತ್ತು ಚಿತ್ರಿಸಲು ಪ್ರಾರಂಭಿಸಿದರು. ಪರವಾನಗಿ ಪಡೆದ ವಾಸ್ತುಶಿಲ್ಪಿಯಾಗಿ ಕೆಲಸ ಮಾಡಿದ ನಂತರ, ಅವರು ಮತ್ತೆ ತಮ್ಮ ಆಸಕ್ತಿಯ ಕ್ಷೇತ್ರವಾದ ಸಾಹಿತ್ಯಕ್ಕೆ ಮರಳಿದರು. ಲಾವಣ್ಯ ಅವರು ಮಕ್ಕಳಿಗಾಗಿ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಕೊರಿಯನ್ ಮತ್ತು ಮ್ಯಾಂಡರಿನ್ ಸೇರಿದಂತೆ ಹದಿನಾಲ್ಕಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ.