ಸಂಪನ್ಮೂಲಗಳು

At Right Angles, A Resource for school Mathematics

ಈ ವಿಭಾಗವು, ಪರಿಸರ ಅಧ್ಯಯನ ಮತ್ತು ವಿಜ್ಞಾನ ತರಗತಿಗಳಲ್ಲಿ ಅನ್ವೇಷಣಾ ಕಲಿಕೆಗೆ ಪೂರಕವಾದ ಪ್ರಾಯೋಗಿಕ ಹಾಗೂ ಕಡಿಮೆ ವೆಚ್ಚದ ಸಂಪನ್ಮೂಲಗಳನ್ನು ಒದಗಿಸುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಪುರಾವೆ ಆಧಾರಿತ ತರ್ಕವನ್ನು ಉತ್ತೇಜಿಸುವ ಪರಿಕರಗಳು ಮತ್ತು ಬೋಧನೆಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಸಾಧನಗಳಿವೆ. ದಿನನಿತ್ಯದ ಸರಳ ... ಸಂದರ್ಭಗಳನ್ನು ಸೂಕ್ತವಾಗಿ ಬಳಸಿಕೊಂಡು, ಸಮಯ ಅಥವಾ ಸಾಮಗ್ರಿಗಳ ಕೊರತೆಯಿದ್ದರೂ ಅನ್ವೇಷಣಾ ಕಲಿಕೆಯನ್ನು ಸಾಧ್ಯವಾಗಿಸಬಹುದು. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು 2023ರಲ್ಲಿ ಸ್ಪಷ್ಟಪಡಿಸಿರುವ ಗುರಿಗಳು ಮತ್ತು ಕಲಿಕಾ ಸಾಮರ್ಥ್ಯಗಳನ್ನು ಆಧರಿಸಿರುವ ಈ ವಿಧಾನಗಳು, ವಿಷಯದ ತಿಳಿವಳಿಕೆಯನ್ನು ಹೆಚ್ಚಿಸುವುದಲ್ಲದೆ, ಕಲಿಕೆಯನ್ನು ಜೀವನದ ಅನುಭವಗಳಿಗೆ ಅನ್ವಯಿಸಲು ಮತ್ತು ವೈಜ್ಞಾನಿಕ ಅನ್ವೇಷಣೆಯ ಅಭ್ಯಾಸವನ್ನು ಬೆಳೆಸಲು ಸಹಾಯ ಮಾಡುತ್ತವೆ. ಈ ಸಂಪನ್ಮೂಲಗಳನ್ನು ಬಳಸಲು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಮತ್ತು ಅನ್ವೇಷಣೆಯನ್ನು ಆಳಗೊಳಿಸುವ ಹೊಸ ಆಲೋಚನೆಗಳನ್ನು ನಮಗೆ ನೀಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ನೈಸರ್ಗಿಕ ಸೂಚಕಗಳಲ್ಲಿನ ಬಣ್ಣ ಬದಲಾವಣೆ (ಶಿಕ್ಷಕರ ಮಾರ್ಗದರ್ಶಿ II)
ಇತರ ನೈಸರ್ಗಿಕ ಸೂಚಕಗಳ ಅನ್ವೇಷಣೆ (ಶಿಕ್ಷಕರ ಮಾರ್ಗದರ್ಶಿ III)
ನೈಸರ್ಗಿಕ ಸೂಚಕಗಳ ಬಳಕೆಗಳ ಅನ್ವೇಷಣೆ (ಶಿಕ್ಷಕರ ಮಾರ್ಗದರ್ಶಿ IV)
ಪ್ರಕೃತಿ ಆಧಾರಿತ ಹೊರಾಂಗಣ ಚಟುವಟಿಕೆಗಳು (ಶಿಕ್ಷಕರ ಮಾರ್ಗದರ್ಶಿ)
ಮೊಟ್ಟೆಯ ಚಿಪ್ಪುಗಳನ್ನು ಏನು ಮಾಡಬಹುದು? (ಶಿಕ್ಷಕರ ಮಾರ್ಗದರ್ಶಿ I)
ಎಲ್ಲ ಕೋಳಿ ಮೊಟ್ಟೆಗಳು ಮರಿಗಳಾಗುತ್ತವೆಯೇ? (ಶಿಕ್ಷಕರ ಮಾರ್ಗದರ್ಶಿ II)
ಮೊಟ್ಟೆಗಳನ್ನು ತಿನ್ನುವುದರಿಂದ ಪ್ರೌಢಾವಸ್ಥೆಯ ಆರಂಭವು ಬದಲಾಗಬಹುದೇ? (ಶಿಕ್ಷಕರ ಮಾರ್ಗದರ್ಶಿ III)
ವಿದ್ಯಾರ್ಥಿ ಅನ್ವೇಷಣೆಯ ಒಂದು ವಿಷಯವಾಗಿ ಜಿಬಿಎಸ್‌ (ಶಿಕ್ಷಕರ ಮಾರ್ಗದರ್ಶಿ I)
ಜಿಬಿಎಸ್‌ ಮತ್ತು ಕಲುಷಿತ ನೀರು (ಶಿಕ್ಷಕರ ಮಾರ್ಗದರ್ಶಿ II)
ಸೂರ್ಯನ ಪಥದ ವೀಕ್ಷಣೆ (ಶಿಕ್ಷಕರ ಮಾರ್ಗದರ್ಶಿ I)
ಕಂಪ್ಯೂಟರ್‌ನಲ್ಲಿ ಸ್ಟೆಲ್ಲಾರಿಯಂ ಬಳಕೆ (ಶಿಕ್ಷಕರ ಮಾರ್ಗದರ್ಶಿ II)
ಸರಳರೇಖೆಯಲ್ಲಿ ಚಲನೆಗೆ ಸಂಬಂಧಿಸಿದ ಪರಕಲ್ಪನೆಗಳನ್ನು ಬೋಧಿಸುವುದಕ್ಕೆ ಸಲಹೆಗಳು. (ಶಿಕ್ಷಕರ ಮಾರ್ಗದರ್ಶಿ)